* ಜ.ನಾ. ತೇಜಶ್ರೀ ವಿರಚಿತ ಕೃತಿಉಡುಪಿ: ಕೋಟೇಶ್ವರದ ಎನ್ಆರ್ಎಎಂಎಚ್ ಪ್ರಕಾಶನ ಮತ್ತು ಸ್ಥಿತಿಗತಿ ತ್ರೈಮಾಸಿಕ ಪತ್ರಿಕೆಯ ವತಿಯಿಂದ ಕನ್ನಡದ ಹೆಸರಾಂತ ಕಾದಂಬರಿಕಾರ, ಸಂಘಟಕ ಪಾಂಡೇಶ್ವರ ಸೂರ್ಯನ. ತೇಜಶ್ರೀ ಅವರ 'ಜೀವರತಿ' ಕಾದಂಬರಿ ಆಯ್ಕೆಯಾಗಿದೆ.ಈ ಕಾದಂಬರಿಯು ಶತಮಾನದ ದೀರ್ಘಾವಧಿಯ ಒಂದು ಮನೆತನದ ಕೈಫಿಯತ್ತಿನಂತೆ ಆರಂಭವಾಗಿ, ಕೊಡಗಿನ ಒಕ್ಕಲಿಗ ಸಮುದಾಯದ ಒಟ್ಟು ಕಥೆಯಂತೆ, ಕುವೆಂಪು ಅವರ ಕಾದಂಬರಿಗಳನ್ನು ನೆನಪಿಸುವ ಅಗಾಧತೆ ಹೊಂದಿದೆ.ಪ್ರಕೃತಿಯ ದಟ್ಟವರ್ಣನೆಯ ಸೊಬಗು, ಯಾವ ಚೌಕಟ್ಟಿಗೂ ಬದ್ಧವಾಗದೆ ಬಂದು ಹೋಗುವ ನೂರಾರು ಪಾತ್ರಗಳ ನಡುವೆ ಜೀವಯಾನವನ್ನೇ ಪಥವಾಗಿಸಿಕೊಳ್ಳುವ ವಿಶಿಷ್ಟತೆ ಹೊಂದಿದೆ.