* ಇತಿಹಾಸ ನೆನಪಿಸಿದ ಪರ್ಕಳ ವಾಲಿಬಾಲ್ ಫ್ರೆಂಡ್ಸ್* ದೀಪಾವಳಿಗೆ ಜೀವನ ಜ್ಞಾನದ ಕೊಡುಗೆಪ್ರಶಾಂತ ಭಾಗ್ವತ ಉಡುಪಿಕ್ರೀಡಾಕ್ಷೇತ್ರದೊಂದಿಗೆ ಸಮಾಜಿಕ ಕಾರ್ಯಗಳ ಮೂಲಕವೂ ನಾಡಿನ ಗಮನ ಸೆಳೆಯುವ ಪರ್ಕಳ. ಹೀಗಾಗಿ ತುಳುನಾಡಿನ ವಿಶಿಷ್ಟತೆ, ಸಂಸ್ಕೃತಿ, ಸಂಪ್ರದಾಯ ಹಾಗೂ ಜನಜೀವನ ಬಿಂಬಿಸುವ ಬೃಹತ್ ಆಕಾಶದೀಪ ಸಿದ್ಧಪಡಿಸಲಾಗಿದೆ. ಸಹಕಾರ ಭಾರತಿ ಹಾಗೂ ಪರ್ಕಳದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಮಹಿಷಮರ್ಧಿನಿ ದೇವಸ್ಥಾನದ ಸಹಕಾರದಲ್ಲಿ ದೇಗುಲದ ಮುಂಭಾಗದ ರಸ್ತೆಯಲ್ಲಿ ಬೃಹತ್ ಆಕಾಶದೀಪ ಅಳವಡಿಸಲಾಗಿದೆ..ಅಷ್ಟಾಕೃತಿಯ ಗೂಡುದೀಪ13 ಫೀಟ್ ಎತ್ತರ, 6 ಫೀಟ್ ಅಗಲದ ಅಷ್ಟಾಕೃತಿಯ ಆಕಾಶದೀಪದಲ್ಲಿ ತುಳುನಾಡಿನ ಆಚರಣೆಯ ಚಿತ್ರ ಅಳವಡಿಸಲಾಗಿದೆ.