ಪುರುಷೋತ್ತಮ ಪೆರ್ಲ ಕಾಸರಗೋಡುನಾಡುಕಂಡ ಶ್ರೇಷ್ಠ ಸಾಹಿತಿ, ನಾಡೋಜ ಡಾ.ಕಯ್ಯರ ಕಿಞ್ಞಣ್ಣ ರೈ ಅವರ ಹೆಸರಲ್ಲಿ ಸ್ಮಾರಕ ಕೇಂದ್ರ ನಿರ್ಮಾಣಕ್ಕಾಗಿ ಡಾ.ಕಯ್ಯರ ಕಿಞ್ಞಣ್ಣ ರೈ ಕುಟುಂಬ ಕಾಸರಗೋಡು ಜಿಲ್ಲಾ. ಕವಿ ಕಯ್ಯರರ ಹೆಸರಲ್ಲಿ ಸ್ಮಾರಕ ಕಟ್ಟಡ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಬದಿಯಡ್ಕ ಸಮೀಪದ ಪೆರಡಾಲ ಕವಿತಾ ಕುಟೀರದ ಬಳಿಯಿರುವ ಸುಮಾರು 30 ಸೆಂಟ್ಸ್ ಜಾಗವನ್ನು ಕಯ್ಯರ ಕುಟುಂಬದವರು ಜಿಲ್ಲಾ ಪಂಚಾಯಿತಿಗೆ ಹಸ್ತಾಂತರಿಸಿ ಎಂಟು ವರ್ಷ ಕಳೆದರೂ ಯಾವುದೇ ನಿರ್ಮಾಣಕಾರ್ಯ ಆರಂಭವಾಗಿಲ್ಲ. ಈ ಹಿಂದೆ ಸಮಾಜಸೇವಕ ವಕೀಲ ಕೆ.ಶ್ರೀಕಾಂತ್ ಅವರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಅವಧಿಯಲ್ಲಿ ಡಾ.ಕಯ್ಯರರ ಹೆಸರಲ್ಲಿ ಸ್ಮಾರಕ ನಿರ್ಮಿಸುವ ಬಗ್ಗೆ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಶ್ರಮಿಸಿದ್ದರು.