ಬೆಂಗಳೂರು: ಹೋಟೆಲ್, ರೆಸ್ಟೋರೆಂಟ್ ಬಳಿಕ ಈಗ ಪೆಟ್ರೋಲ್ ಬಂಕ್ಗಳ ಸರದಿ ಶುರುವಾಗಿದೆ. ರಾಜ್ಯದ 805 ಬಂಕ್ ಗಳಲ್ಲಿ ತಪಾಸಣೆ ನಡೆಸಿದ ಸಂದರ್ಭದಲ್ಲಿ, 768 ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ಅಳತೆಯಲ್ಲಿ ಗೋಲ್ಮಾಲ್ ಮಾಡುತ್ತಿರುವುದು ಕಂಡು ಬಂದಿದೆ. ಈ ಸಂಬಂಧ ಆಹಾರ ಸಚಿವ ರಿಜ್ವಾನ್ ಅರ್ಷದ್ ಮಾಹಿತಿ ಹಂಚಿಕೊಂಡಿದ್ದರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಒಂದು ಮಹತ್ವದ ವಿಚಾರ ಇಂದು ಮಾತನಾಡುತ್ತಿದ್ದೇವೆ. ಇಂಧನ ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ವಿಚಾರ, ನಮ್ಮ ರಾಜ್ಯದಲ್ಲಿ 5946 ಪೆಟ್ರೋಲ್ ಬಂಕ್ ಗಳಿವೆ. ಇಲ್ಲಿ ಜನರಿಗೆ ಸರಿಯಾದ ಪ್ರಮಾಣದಲ್ಲಿ ಇಂಧನ ಸಿಗುತ್ತಿದೆಯೇ ಎಂದು ಅಧ್ಯಯನ ಮಾಡಿದ್ದೇವೆ.