Abhishek Sharma school teacher: ಟೀಮ್ ಇಂಡಿಯಾದ ಉದಯೋನ್ಮುಖ ಯುವ ಓಪನರ್ ಅಭಿಷೇಕ್ ಶರ್ಮಾ ತಮ್ಮ ಸರಳತೆ ಮತ್ತು ಗುರುಭಕ್ತಿಯಿಂದ ನೆಟ್ಟಿಗರ ಮನ ಗೆದ್ದಿದ್ದಾರೆ. ದೀಪಾವಳಿ ಹಬ್ಬದ ಶುಭ ಸಂದರ್ಭ. ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಅವರು ತಮ್ಮ ಶಾಲಾ ಶಿಕ್ಷಕಿಗೆ ನೀಡಿದ ದಿಢೀರ್ ಸರ್ಪ್ರೈಸ್ ವಿಸಿಟ್ನ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.ದೀಪಾವಳಿ ಆಚರಣೆ ವೇಳೆ ಅಭಿಷೇಕ್ ಶರ್ಮಾ ತಮ್ಮ ಶಿಕ್ಷಕಿಯ ಮನೆಯ ರಸ್ತೆಯಲ್ಲಿ ಸಾಗುತ್ತಿದ್ದರು. ಈ ವೇಳೆ ಕಾರಿನಿಂದ ಕೆಳಗಿಳಿದ ಅವರು, ರಸ್ತೆ ದಾಟಿ ಗೇಟ್ ಬಳಿಗೆ ಬಂದಿದ್ದಾರೆ. ಮುಖಕ್ಕೆ ಧರಿಸಿದ್ದ ಮಾಸ್ಕ್ ತೆಗೆದು ನಿಂತ ಅಭಿಷೇಕ್ನನ್ನು ನೋಡುತ್ತಿದ್ದಂತೆ ಶಿಕ್ಷಕಿಗೆ ಆಶ್ಚರ್ಯದ ಜತೆಗೆ ಅಪಾರ ಸಂತೋಷವಾಗಿದೆ.