ಹಬ್ಬ ಬಂತೆಂದರೆ ದೂರದ ಊರಿನಲ್ಲಿರುವ ಮಕ್ಕಳು ಮನೆಗೆ ಬರಲಿ ಎಂದು ಬಯಸುವುದು ಸಹಜ. ಆದರೆ ಇಲ್ಲೊಬ್ಬ ಯುವತಿ ದೀಪಾವಳಿ ಹಬ್ಬಕ್ಕೆ ಈ ಸಲ ಬರಲ್ಲ ಎಂದೇಳಿ ತಂದೆ ತಾಯಿಗೆ ಸರ್ಪ್ರೈಸ್ ನೀಡಿದ್ದಾಳೆ. ವಿದೇಶದಿಂದ ಯಾವುದೇ ಸುಳಿವು ನೀಡದೇ ಬಂದಿದ್ದಾಳೆ. ಮಗಳ ಕಂಡೊಡನೆ ಹೆತ್ತವರು ಖುಷಿಯಲ್ಲಿ ಕಣ್ಣೀರಿಟ್ಟಿದ್ದಾರೆ. ಈ ಭಾವನಾತ್ಮಕ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದೀಪಾವಳಿ ಹಬ್ಬದ ಸಂಭ್ರಮ ಸಡಗರ ಎಲ್ಲೆಡೆ ಮನೆ ಮಾಡಿದೆ. ದೂರದ ಊರಿನಲ್ಲಿದ್ದ ಮಕ್ಕಳು ಹಬ್ಬ ಆಚರಿಸಲು ತಮ್ಮ ಊರಿಗೆ ತೆರಳಿದ್ದಾರೆ. ಆದರೆ ಇಲ್ಲೊಬ್ಬ ಯುವತಿಯು ಹೆತ್ತವರಿಗೆ ಹೇಳದೇನೆ ದಿಢೀರನೆ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ.