ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ಎರಡೂ ಎನ್ಸಿಪಿ ಬಣಗಳ ವಿಲೀನದ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆಯೂ, ಶರದ್ ಪವಾರ್ ಅವರು ತಮ್ಮ ದಶಕಗಳ ಸುದೀರ್ಘ ರಾಜಕೀಯ ಶ್ರಮವನ್ನು ವ್ಯರ್ಥಗೊಳಿಸಲ್ಲ. ಮ. ಮತ್ತು ಕೋಮುವಾದಿ ಶಕ್ತಿಗಳ ಜೊತೆ ಸೇರಲ್ಲ ಎಂದು ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವತ್ ಹೇಳಿದ್ದಾರೆ.. 09) ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಈ ವಿಷಯದ ಬಗ್ಗೆ ಶರದ್ ಪವಾರ್ ತಮ್ಮ ನಿಲುವನ್ನು ಸ್ಪಷ್ಟಪಡಿಸುವವರೆಗೆ ಕಾಯಬೇಕು. ವಿಲೀನಕ್ಕೆ ಸಂಬಂಧಿಸಿದ ಯಾವುದೇ ಪ್ರಸ್ತಾವನೆ ಸದ್ಯಕ್ಕೆ ಇಲ್ಲ. ಜನವರಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮೃತಪಟ್ಟ ಬಳಿಕ ಎನ್ಸಿಪಿ ನಾಯಕರಿಲ್ಲದಂತಾಗಿದೆ ಎಂದಿದ್ದಾರೆ.ಪ್ರಸ್ತುತ ಎನ್ಸಿಪಿಯನ್ನು ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಮುನ್ನಡೆಸುತ್ತಿದ್ದಾರೆ.