ಶಕ್ತಿ ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶವಿದ್ದರೂ, ವಿಜಯಪುರ ಜಿಲ್ಲೆಯ ಗಡಿಭಾಗದ ಮಹಿಳೆಯರು, ವಿಶೇಷವಾಗಿ ಹೊರ್ತಿ, ಝಳಕಿ, ಧೂಳಖೇಡ ಗ್ರಾಮಗಳವರು ತೊಂದರೆಗೊಳಗಾಗಿದ್ದಾರೆ. ವಿಜಯಪುರ-ಸೊಲ್ಲಾಪುರ ಅಂತರರಾಜ್ಯ ಬಸ್ಗಳಲ್ಲಿ ಅವರಿಗೆ ಯೋಜನೆ ಅನ್ವಯಿಸುವುದಿಲ್ಲ. ಈ ಮಹಿಳೆಯರು ಯೋಜನೆಯನ್ನು ವಿಸ್ತರಿಸಲು ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ವಿಜಯಪುರ, ನ.9: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿಗಳಲ್ಲಿ ಪ್ರಮುಖವಾದ ಶಕ್ತಿ ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ಆದರೆ, ವಿಜಯಪುರ ಜಿಲ್ಲೆಯ ಗಡಿಭಾಗದ ಮಹಿಳೆಯರಿಗೆ ಈ ಯೋಜನೆ ಲಭ್ಯವಾಗುತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ.