ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮನುಷ್ಯರಂತೆ ಪ್ರಾಣಿಗಳು ಕೂಡ ತಮ್ಮ ಕಂದಮ್ಮಗಳನ್ನು ಕಾಳಜಿ ವಹಿಸುತ್ತವೆ. ಇದೀಗ ತಾಯಾನೆ ತನ್ನ ಮಲಗಿದ್ದ ಕಂದಮ್ಮನ ನಿದ್ರೆಯನ್ನು ಹಾಳು ಮಾಡಲು ಪ್ರಯತ್ನಿಸಿದೆ. ಕೀಟಲೆ ಮಾಡುತ್ತಾ ಎಬ್ಬಿಸಲು ಪ್ರಯತ್ನಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಪ್ರಾಣಿ ಪ್ರಪಂಚದ ಕೆಲ ದೃಶ್ಯಗಳು ನೆಟ್ಟಿಗರ ಹೃದಯ ಗೆಲ್ಲುತ್ತವೆ. ತಾಯಾನೆ (mother elephant) ಹಾಯಾಗಿ ನಿದ್ರಿಸುತ್ತಿದ್ದ ಮರಿಯಾನೆ ಮೆಲ್ಲನೆ ಎಬ್ಬಿಸಲು ಪ್ರಯತ್ನಿಸುತ್ತಿದೆ. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.