ಬಿಜೆಪಿ ಆರೋಪಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷ ಪವನ್ ಖೇರಾ, "ಬಿಜೆಪಿಯವರ ಮನೆಯಲ್ಲಿ ಯಾರಿಗಾದರೂ ಡಿಕ್ಷನರಿ (ನಿಘಂಟು) ನೋಡುವ ಅಭ್ಯಾಸವಿದೆಯೇ? ಅವರ ಬಳಿ ಮೊಬೈಲ್ ಇದೆಯಲ್ಲವೇ, 'ಈದ್' ಎಂದರೆ ಏನು ಎಂದು ಗೂಗಲ್ ಮಾಡಿ ನೋಡಲಿ. 'ಈದ್' ಎಂದರೆ ಮೂಲತಃ 'ಹಬ್ಬ' (ಸಂಭ್ರಮ) ಎಂದರ್ಥ. ದೀಪಾವಳಿ ಹಬ್ಬ, ಹೋಳಿ ಹಬ್ಬ ಎಂಬ ಅರ್ಥದಲ್ಲೇ ಖರ್ಗೆಯವರು ಆ ಮಾತು ಹೇಳಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ.