ಬೆಂಗಳೂರಿನಲ್ಲಿ ನಡೆದಿರುವ ಸರಣಿ ಹತ್ಯೆ ಕೇಸ್ಗೆ ಸಂಬಂಧಿಸಿದಂತೆ ಕೊನೆಗೂ 7 ಮೃತದೇಹಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಅಷ್ಟೇ ಅಲ್ಲದೆ ಆರೋಪಿ ಇಂದುಶೇಖರ್ನ ಸಂಚಿನ ಮತ್ತಷ್ಟು ಸುಳಿವು ಕೂಡ ಬಯಲಾಗಿದೆ. ಪ್ರಕರಣದ ತನಿಖೆ ಚುರುಕುಗೊಂಡಿದ್ದು, 200ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಖಾಕಿ ಪಡೆ ಪರಿಶೀಲಿಸಿದ್ದಾರೆ. ಬೆಂಗಳೂರು, ನವೆಂಬರ್ 09: ಬೆಂಗಳೂರನ್ನೇ ನಡುಗಿಸಿದ್ದ ಏಳು ಕೊಲೆಗಳ ಪ್ರಕರಣದಲ್ಲಿ, ಕೊನೆಗೂ ಎಲ್ಲಾ ಏಳು ಮೃತದೇಹಗಳನ್ನ ಪೊಲೀಸರು ಪತ್ತೆಹಚ್ಚಿದ್ದಾರೆ. ಇದರ ಬೆನ್ನಲ್ಲೇ ಆರೋಪಿ ಇಂದುಶೇಖರ್ನ, ಸಂಚಿನ ಮತ್ತಷ್ಟು ಸುಳಿವುಗಳು ಪೊಲೀಸರಿಗೆ ಸಿಕ್ಕಿವೆ. ಆರೋಪಿಯ ಚಲನವಲನಗಳನ್ನ ಪತ್ತೆಹಚ್ಚಲು ಪೊಲೀಸರು 200ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದ್ದಾರೆ.