ಕೇನ್ ವಿಲಿಯಮ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳುವ ಮುನ್ನ ವಿರಾಟ್ ಕೊಹ್ಲಿ ಜೊತೆ ಮಾತನಾಡಿದ್ದನ್ನು ಬಹಿರಂಗಪಡಿಸಿದ್ದಾರೆ. ಕೊಹ್ಲಿಯೊಂದಿಗಿನ ಮಾತುಕತೆ ತಮ್ಮ ನಿವೃತ್ತಿ ನಿರ್ಧಾರಕ್ಕೆ ಸ್ಪಷ್ಟತೆ ನೀಡಿತು ಎಂದಿದ್ದಾರೆ. ಇಬ್ಬರ ಕ್ರಿಕೆಟ್ ಮತ್ತು ವೈಯಕ್ತಿಕ ಜೀವನದ ಹೋಲಿಕೆಗಳು, ಸವಾಲುಗಳು ಮತ್ತು ಅನುಭವಗಳನ್ನು ಹಂಚಿಕೊಂಡಾಗ, ಅದು ಕನ್ನಡಿಯ ಮುಂದೆ ನಿಂತಂತೆ ಅನಿಸಿತು ಎಂದು ವಿಲಿಯಮ್ಸನ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳುವ ನಿರ್ಧಾರ ಕೈಗೊಳ್ಳುವ ಒಂದು ದಿನದ ಮೊದಲು ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಜೊತೆ ಮಾತನಾಡಿದ್ದೆ ಎಂದು ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಬಹಿರಂಗಪಡಿಸಿದ್ದಾರೆ. ಕೊಹ್ಲಿ ಜೊತೆಗಿನ ಆ ಮಾತುಕತೆ ತಮ್ಮ ಜೀವನದ ನಿರ್ಧಾರಕ್ಕೆ ಸ್ಪಷ್ಟತೆ ನೀಡಿತ್ತು.