ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮುಖಾಮುಖಿ ಚರ್ಚೆ ನಡೆಸುವ ತಮ್ಮ ಬಹಿರಂಗ ಸವಾಲನ್ನು ಪುನರುಚ್ಚರಿಸಿದ್ದಾರೆ. ವಿಪಕ್ಷ ನಾಯಕರನ್ನು "ದಿಮಾಗಿ ನಕ್ಸಲರು" ಎಂದು ಪ್ರಧಾನಿ ಮೋದಿ ಟೀಕಿಸಿದ್ದರು. ನಿನ್ನೆ ಸಿಆರ್ಪಿಎಫ್ ಜವಾನರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಬಂದೂಕು ಹಿಡಿದ ಮಾವೋವಾದಿಗಳನ್ನು ನಿರ್ಮೂಲನೆ ಮಾಡಲಾಗಿದ್ದರೂ ನಕ್ಸಲ್ ಬೆದರಿಕೆ ಸಂಪೂರ್ಣವಾಗಿ ಮುಗಿದಿಲ್ಲ ಎಂದು ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಸವಾಲೆಸೆದಿದ್ದಾರೆ.