‘ಆಯುಷ್’ ಸಿನಿಮಾದ ನಿರ್ದೇಶಕ ಪುರುಷೋತ್ತಮ್ ಅವರನ್ನು ಚಿತ್ರತಂಡದಿಂದ ಕೈಬಿಡಲಾಗಿದ್ದು, ಈ ಬಗ್ಗೆ ಅವರು ಆರೋಪ ಮಾಡಿದ್ದಾರೆ. ಇದೀಗ ನಟಿ ಪ್ರಿಯಾಂಕಾ ಉಪೇಂದ್ರ ಅವರು ನಿರ್ದೇಶಕ ಪುರುಷೋತ್ತಮ್ ವಿರುದ್ಧ ಹರಿಹಾಯ್ದಿದ್ದು, ಪುರುಷೋತ್ತಮ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಟಿವಿ9 ಬಳಿ ಹೇಳಿದ್ದಾರೆ. ಪ್ರಿಯಾಂಕಾ ಹೇಳಿರುವುದೇನು? ವಿಡಿಯೋ ನೋಡಿ... ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ದಂಪತಿಗಳ ಪುತ್ರ ಆಯುಷ್ ಸಿನಿಮಾ ಹೀರೋ ಆಗುತ್ತಿದ್ದಾರೆ. ಅವರ ನಟನೆಯ ಮೊದಲ ಸಿನಿಮಾಕ್ಕೆ ‘ಆಯುಷ್’ ಎಂದೇ ಹೆಸರಿಡಲಾಗಿದ್ದು, ಸಿನಿಮಾದ ಚಿತ್ರೀಕರಣ ಈಗಾಗಲೇ ಶುರುವಾಗಿದೆ.