ಭಾರತ-ನ್ಯೂಜಿಲೆಂಡ್ ಏಕದಿನ ಸರಣಿಯ ಮೂರನೇ ಪಂದ್ಯಕ್ಕೆ ಮಳೆ ಭೀತಿ ಆವರಿಸಿದೆ. ಈಗಾಗಲೇ 2-0 ಮುನ್ನಡೆ ಸಾಧಿಸಿರುವ ಭಾರತ, ಸರಣಿ ಕ್ಲೀನ್ಸ್ವೀಪ್ ಗುರಿಯಲ್ಲಿದೆ. ಆದರೆ ಹ್ಯಾಮಿಲ್ಟನ್ನಲ್ಲಿ ಮಂಗಳವಾರ ದಿನವಿಡೀ ಮಳೆಯಾಗುವ ಮುನ್ಸೂಚನೆ ಇದೆ. ಅಕ್ಯೂವೆದರ್ ವರದಿ ಪ್ರಕಾರ, ಪಂದ್ಯ ನಡೆಯುವುದು ಅನುಮಾನ. ಮಳೆಯಿಂದ ಪಂದ್ಯ ರದ್ದಾದರೆ, ಸರಣಿ ಗೆದ್ದರೂ ಅಭಿಮಾನಿಗಳ ನಿರೀಕ್ಷೆಗೆ ನಿರಾಸೆಯಾಗಲಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ ನಿರೀಕ್ಷಿತ ಮಟ್ಟದಲ್ಲಿ ರೋಚಕತೆ ಮೂಡಿಸಿಲ್ಲ. ಟೀಂ ಇಂಡಿಯಾ ತನ್ನ ಬಲಿಷ್ಠ ಬೌಲಿಂಗ್ ಪ್ರದರ್ಶನದ ನೆರವಿನಿಂದ ಮೊದಲ ಎರಡು ಪಂದ್ಯಗಳನ್ನು ಗೆದ್ದು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಆದರೆ ನ್ಯೂಜಿಲೆಂಡ್ನ ಹವಾಮಾನ ಮಾತ್ರ ಪಂದ್ಯಗಳ ರಂಗನ್ನು ಹಾಳು ಮಾಡುತ್ತಿದೆ.