ಆರಂಭದಿಂದಲೂ ಬಿಗ್ ಬಾಸ್ ಮನೆಯಲ್ಲಿ ಆಸಿಯಾ ಮತ್ತು ಯಶಸ್ ಅವರು ಆಪ್ತವಾಗಿದ್ದಾರೆ. ಅವರಿಬ್ಬರ ನಡುವೆ ಸೌಂದರ್ಯಾ ಕೂಡ ಬಂದಿದ್ದರು. ಆದರೆ ಕಳೆದ ವಾರ ಯಶಸ್ಗೆ ಆಸಿಯಾ ಅವರು ರಾಖಿ ಕಟ್ಟಿದ್ದು ಈಗ ಚರ್ಚೆ ಆಗಿದೆ. ಆಸಿಯಾ ನಡೆಯನ್ನು ಗಿಮಿಕ್, ಡ್ರಾಮಾ ಎಂದು ಗಾನವಿ ನೇರವಾಗಿ ಹೇಳಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಯಶಸ್ ಅವರು ಮಹಿಳಾ ಸ್ಪರ್ಧಿಗಳ ಜೊತೆ ಹೆಚ್ಚು ಆಪ್ತವಾಗಿದ್ದಾರೆ. ವಿಶೇಷವಾಗಿ ಆಸಿಯಾ ಮತ್ತು ಸೌಂದರ್ಯಾ ಜೊತೆ ಅವರಿಗೆ ಹೆಚ್ಚು ಆಪ್ತತೆ ಇದೆ. ಅವರ ನಂಟಿನ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳಿವೆ.