ಹಾಸನ ಡಿಸಿ ಲತಾಕುಮಾರಿ ತಮ್ಮ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಮಾಡಿರುವ ಭ್ರಷ್ಟಾಚಾರ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ವಾಟ್ಸಾಪ್ ಚಾಟ್ ಎಡಿಟ್ ಮಾಡಲಾಗಿದೆ ಎಂದು ಅವರ ಪಿ.ಎ. ಸೈಬರ್ ಕ್ರೈಮ್ಗೆ ದೂರು ನೀಡಿದ್ದಾರೆ. ಸತ್ಯ ಗೆಲ್ಲುತ್ತದೆ, ನಿಯಮಾನುಸಾರ ಕೆಲಸ ಮಾಡಿ ಎಂದು ಸಿಎಂ ಡಿಕೆಶಿ ಸಲಹೆ ನೀಡಿದ್ದಾರೆ. ಹಾಸನ, ನವೆಂಬರ್ 08: ಭ್ರಷ್ಟಾಚಾರ ಆರೋಪ ವಿಚಾರವಾಗಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಹಾಸನ ಡಿಸಿ ಲತಾಕುಮಾರಿ ಆಕ್ರೋಶ ವ್ಯಕ್ತಪಡಿಸಿದ್ದು, ‘ನಾನು ಯಾವುದೇ ತಪ್ಪು ಮಾಡಿಲ್ಲ, ಮಾಡುತ್ತಿಲ್ಲ, ಮಾಡುವುದೂ ಇಲ್ಲ. ಈ ಬಗ್ಗೆ ತನಿಖೆ ನಡೆದು ಯಾರು ತಪ್ಪಿತಸ್ಥಿರಿದ್ದಾರೆ ಅವರ ವಿರುದ್ಧ ಕ್ರಮ ಆಗಲಿ ಎಂದಿದ್ದಾರೆ’.