ಈ ಮೊದಲು ಮಂಜ ಬಿಗ್ ಬಾಸ್ ಆಟದಿಂದ ಔಟ್ ಆದಾಗ ಕೆಲವು ಸ್ಪರ್ಧಿಗಳು ಖುಷಿಪಟ್ಟಿದ್ದರು. ಆದರೆ ಈಗ ಅವರು ಮತ್ತೆ ದೊಡ್ಮನೆ ಒಳಗೆ ಕಾಲಿಟ್ಟಿರುವುದರಿಂದ ಎಲ್ಲರಿಗೂ ಅಚ್ಚರಿ ಆಗಲಿದೆ. ದೀಪಾವಳಿ ಎಂಬ ಕಾರಣಕ್ಕೆ ಈ ವಾರ ಯಾರೂ ಕೂಡ ಎಲಿಮಿನೇಟ್ ಆಗಿಲ್ಲ. ಆ ಸಿಹಿ ಸುದ್ದಿಯ ನಡುವೆ ಖಾರದ ರೀತಿಯಲ್ಲಿ ಮಂಜನ ರೀ-ಎಂಟ್ರಿ ಆಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋಗೆ ಮಾಡರ್ನ್ ಮಹಾಕವಿ ಮಂಜ ವಾಪಸ್ ಬಂದಿದ್ದಾರೆ. ಇದರಿಂದಾಗಿ ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ಖಂಡಿತ ಶಾಕ್ ಆಗಲಿದೆ.