ನವದೆಹಲಿ: ದೀಪಾವಳಿ ಹಿನ್ನೆಲೆಯಲ್ಲಿ ಲಡಾಖ್ನ ಕಾರ್ಗಿಲ್ಗೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಯೋಧರನ್ನು ಉದ್ದೇಶಿಸಿ, ನಿಮ್ಮೊಂದಿಗೆ ಇರದೇ ನಾನು ಉತ್ತಮ ದೀಪಾವಳಿಯನ್ನು ಆಚರಿಸಲು ಸಾಧ್ಯವಿಲ್ಲ ಎ. ಈ ವರ್ಷ ಅವರು ಕಾರ್ಗಿಲ್ಗೆ ಭೇಟಿ ನೀಡಿದ್ದಾರೆ. ಈ ವೇಳೆ ಯೋಧರಿಗೆ ಸಿಹಿ ಹಂಚಿ, ಅವರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು..ನನ್ನ ಪಾಲಿಗೆ ನೀವೆಲ್ಲರೂ ನನ್ನ ಕುಟುಂಬವಾಗಿದ್ದೀರಿ. ನಿಮ್ಮೆಲ್ಲರ ನಡುವೆ ದೀಪಾವಳಿಯನ್ನು ಆಚರಿಸುವುದು ಒಂದು ಭಾಗ್ಯವೇ ಸರಿ. ಕಾರ್ಗಿಲ್ನ ಈ ವಿಜಯದ ಭೂಮಿಯಲ್ಲಿ ನಿಂತು ದೇಶದ ಹಾಗೂ ವಿಶ್ವದ ಜನರಿಗೆ ದೀಪಾವಳಿ ಶುಭ ಕೋರುತ್ತೇನೆ. ಕಾರ್ಗಿಲ್ ವಿಜಯ ಪತಾಕೆ ಹಾರಿಸದ ಪಾಕಿಸ್ತಾನದೊಂದಿಗೆ ಒಂದೇ ಒಂದು ಯುದ್ಧ ನಡೆದಿಲ್ಲ.