ಕಾನ್ಪುರ: ಇನ್ನೇನು ದೀಪಾವಳಿ ಹಬ್ಬವನ್ನು ಸಂಭ್ರಮಿಸಬೇಕು ಎಂದು ಮನೆಯನ್ನೆಲ್ಲ ಸ್ವಚ್ಛವಾಗಿಸಿ, ಹೂವು-ಹಣ್ಣುಗಳಿಂದ ಪೂಜೆ ಮಾಡಿ, ಸಿಹಿ ತಿನ್ನುವ ಖುಷಿಯಲ್ಲಿದ್ದ ಕುಟುಂಬಕ್ಕೆ ಇದೀಗ ಬರ ಸಿಡಿಲು ಬಡ. ಹಬ್ಬದ ಹಿಂದಿನ ದಿನ ಮಹಿಳೆಯೊಬ್ಬರು ಅಡ್ಡಾದಿಡ್ಡಿ ವೇಗವಾಗಿ ಮಹೀಂದ್ರಾ ತಾರ್ ಕಾರನ್ನು ಚಲಾಯಿಸಿದ್ದಲ್ಲದೇ ಸ್ಕೂಟರ್ವೊಂದಕ್ಕೆ ರಭಸವಾಗಿ ಗುದ್ದಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವಿಗೀಡಾದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಸಂತೋಷ್ ಸಿಂಗ್ ಚೌಹಾಣ್ (55) ಎಂದು ಗುರುತಿಸಲಾಗಿದ್ದು, ಶನಿವಾರ ಸಂಜೆ 7:30ರ ಸುಮಾರಿಗೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.