Bigg Boss Kannada season 13: ಇದೀಗ ಬಿಗ್ಬಾಸ್ ಅನಿರೀಕ್ಷಿತ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ರೌಡಿತನ ಮೆರೆದಿದ್ದ ಮಾಡರ್ನ್ ಕವಿ ಮಂಜ ಇದೀಗ ಬಿಗ್ಬಾಸ್ ಮನೆಗೆ ಮರಳುತ್ತಿದ್ದಾರೆ. ಆತನ ವರ್ತನೆಯ ಕಾರಣದಿಂದಾಗಿ ಮಂಜನನ್ನು ಹೊರಗೆ ಹಾಕಿದ್ದ ಬಿಗ್ಬಾಸ್ ಇದೀಗ ಮತ್ತೆ ಅವರೇ ಮಂಜನನ್ನು ಮನೆಗೆ ಕಳಿಸುತ್ತಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಕಳೆದ ಕೆಲ ವಾರಗಳಿಂದ ನಗು, ತಮಾಷೆ, ಭಾವುಕತೆ, ಸೆಂಟಿಮೆಂಟ್ಗಳು ತುಂಬಿವೆ. ಆದರೆ ಇದೀಗ ಬಿಗ್ಬಾಸ್ ಅನಿರೀಕ್ಷಿತ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಇಂದು (ನವೆಂಬರ್ 08) ಬೆಳಿಗ್ಗೆ ಪ್ರಸಾರ ಆಗಿರುವ ಪ್ರೋಮೊನಲ್ಲಿ ತೋರಿಸಿರುವಂತೆ ಸುದೀಪ್ ಅವರು ಮಾಡರ್ನ್ ಕವಿ ಮಂಜನನ್ನು ವೇದಿಕೆಗೆ ಕರೆದಿದ್ದಾರೆ.