ಭಕ್ತಿಪ್ರಧಾನ ಚಿತ್ರ ‘ಹನುಮಾನ್ ಅಂಶ್’ ಒಟಿಟಿಗೆ ಬರಲು ಸಜ್ಜಾಗಿದೆ. ನವೆಂಬರ್ 27ರಿಂದ ಈ ಚಿತ್ರ ಸೋನಿ ಲೈವ್ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಸಿನಿಮಾದ ನಿರ್ದೇಶಕ ವಿಶಾಲ್ ಚತುರ್ವೇದಿ ಮತ್ತು ಸೋನಿ ಲೈವ್ ಇನ್ಸ್ಟಾಗ್ರಾಮ್ನಲ್ಲಿ ಜಂಟಿಯಾಗಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಚಿತ್ರಮಂದಿರಗಳಲ್ಲಿ ಮ್ಯಾಜಿಕ್ ಮಾಡಿದ ಈ ಸಿನಿಮಾ ಒಟಿಟಿಯಲ್ಲೂ ಮ್ಯಾಜಿಕ್ ಮಾಡುವ ಸಾಧ್ಯತೆ ದಟ್ಟವಾಗಿದೆ. ‘ಹನುಮಾನ್ ಅಂಶ್’ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಮೋಡಿ ಮಾಡಿದ ಸಿನಿಮಾ. ಕೇವಲ ಎರಡು ಕೋಟಿ ಬಜೆಟ್ ಹಾಕಿ ನಿರ್ಮಾಣ ಮಾಡಿದ ಈ ಸಿನಿಮಾ ಸುಮಾರು 500 ಕೋಟಿ ಹಣವನ್ನು ಬಾಕ್ಸ್ ಆಫೀಸ್ನಲ್ಲಿ ಗಳಿಕೆ ಮಾಡಿತು.