ಬೆಂಗಳೂರು (ಸೆ.24): ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (IRDAI) ವಿಮಾ ವಿತರಣೆಯ ಆರ್ಥಿಕ ಮಾದರಿಯಲ್ಲಿ ಹಾಗೂ ಕಮಿಷನ್ ದರಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಪ್ರಸ್ತಾಪಿಸಿದ ಬೆನ್ನಲ್ಲೇ, 'ಪಾಲಿಸಿಬಜಾರ್' (Policybazaar) ಕಂಪನಿಯ ಮಾತೃ ಸಂಸ್ಥೆಯಾದ 'ಪಿಬಿ ಫಿನ್ಟೆಕ್' (PB Fintech) ಷೇರುಗಳು ಗುರುವಾರ (ಸೆಪ್ಟೆಂಬರ್ 24) ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡಿವೆ. ಒಂದೇ ದಿನದಲ್ಲಿ ಕಂಪನಿಯ ಷೇರು ಮೌಲ್ಯ ಶೇಕಡಾ 34 ರಷ್ಟು ಕುಸಿತ ಕಂಡಿದ್ದು, ಇದರಿಂದಾಗಿ ಕಂಪನಿಯಲ್ಲಿ ಬೃಹತ್ ಪ್ರಮಾಣದ ಹೂಡಿಕೆ ಹೊಂದಿದ್ದ ಮ್ಯೂಚುವಲ್ ಫಂಡ್ ಸಂಸ್ಥೆಗಳು ಬರೋಬ್ಬರಿ 9,700 ಕೋಟಿ ರೂಪಾಯಿಗಳಿಗೂ ಹೆಚ್ಚು ನಷ್ಟ ಅನುಭವಿಸಿವೆ. ಬುಧವಾರದ ವಹಿವಾಟಿನಲ್ಲಿ 1,886.