ಬೆಂಗಳೂರಿನ 7 ಜನರ ಭೀಕರ ಕೊಲೆ ಪ್ರಕರಣದಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮತ್ತಿಬ್ಬರ ಶವ ಪತ್ತೆಯಾಗಿದ್ದು, ಒಟ್ಟು ಮೃತದೇಹಗಳ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಉಳಿದಿಬ್ಬರ ಶವಕ್ಕಾಗಿ ಶಿರಾಡಿ ಘಾಟ್ನಲ್ಲಿ ಶೋಧ ಮುಂದುವರಿದಿದೆ. ಮತ್ತೊಂದೆಡೆ ಆರೋಪಿಯ ವಿಚಾರಣೆಯೂ ತೀವ್ರಗೊಂಡಿದ್ದು, ಕೊಲೆ ಪ್ರಕರಣ ಸಂಬಂಧ ಇನ್ನಷ್ಟು ಮಾಹಿತಿಗಳು ಬಯಲಾಗಬೇಕಿವೆ. ಬೆಂಗಳೂರು, ನವೆಂಬರ್ 08: ಒಂದೇ ಕುಟುಂಬದ 7 ಜನರ ಬರ್ಬರ ಹತ್ಯೆ ಕೇಸ್ ಸಂಬಂಧ ರಾಜಾಜಿನಗರ ಪೊಲೀಸರು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮತ್ತೆರಡು ಮೃತದೇಹಗಳನ್ನು ಪತ್ತೆ ಹಚ್ಚಿದ್ದಾರೆ. ಪತ್ತೆಯಾಗಿರುವ ಮೃತದೇಹಗಳು ಶಿವಕುಮಾರ್ ಮತ್ತು ದಿವ್ಯಾ ದಂಪತಿಯದ್ದು ಎನ್ನಲಾಗಿದೆ.