ಬಿಗ್ಬಾಸ್ ಮನೆಯಲ್ಲಿ ಅನುಚಿತ ವರ್ತನೆ, ಶೋಗೆ ಅಗೌರವ, ಮನೆಯಲ್ಲಿ ಅತ್ಯಂತ ಕೆಟ್ಟ ಪದಗಳ ಬಳಕೆ, ಹಲ್ಲೆಗೆ ಪ್ರಚೋದನೆ ಇತ್ಯಾದಿಗಳ ಕಾರಣದಿಂದಾಗಿ ಖುದ್ದು ಬಿಗ್ಬಾಸ್ ಆತನನ್ನು ಮನೆಯಿಂದ ಹೊರಗೆ ಹಾಕಿದ್ದರು. ಆದರೆ ಇದೀಗ ಮತ್ತೆ ಮಂಜನನ್ನು ಮನೆಗೆ ವಾಪಸ್ ಕರೆದುಕೊಳ್ಳಲಾಗಿದೆ. ದೀಪಾವಳಿ ಹಬ್ಬದಂದು ಮಂಜನನ್ನು ಖುದ್ದು ಸುದೀಪ್ ಅವರು ಮರಳಿ ಶೋಗೆ ಸ್ವಾಗತ ಮಾಡಿದ್ದಾರೆ. ಅಪ್ಪಿಕೊಂಡು ಮಂಜನಿಗೆ ಸ್ವಾಗತ ಕೋರಿದ್ದಾರೆ. ವಿಡಿಯೋ ನೋಡಿ... ತನ್ನನ್ನು ತಾನು ಮಾಡರ್ನ್ ಕವಿ ಎಂದು ಕರೆದುಕೊಳ್ಳುತ್ತಿದ್ದ ಮಂಜ, ಬಿಗ್ಬಾಸ್ಗೆ ಅಗ್ನಿಪರೀಕ್ಷೆ ಮೂಲಕ ಎಂಟ್ರಿ ಕೊಟ್ಟಿದ್ದ.