INDvsNZ: ನ್ಯೂಜಿಲೆಂಡ್ ವಿರುದ್ಧ ವೆಲ್ಲಿಂಗ್ಟನ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 135 ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟುವಾಗ ಭಾರತ ತಂಡವು ಅಕ್ಷರ್ ಪಟೇಲ್ರನ್ನು 5ನೇ ಕ್ರಮಾಂಕದ. ಆದರೆ, ವೇಗಿಗಳಿಗೆ ಸಹಕಾರಿಯಾಗಿದ್ದ ಪಿಚ್ನಲ್ಲಿ ಅಕ್ಷರ್ ರನ್ ಗಳಿಸಲು ಪರದಾಡಿ 17 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿ ಮ್ಯಾಥ್ಯೂ ಫಿಶರ್ ಬೌಲಿಂಗ್ನಲ್ಲಿ ತಮ್ಮ ವಿಕೆಟ್ ಒಪ್ಪಿಸಿದರು. ಈ ಕುರಿತು ಕ್ರಿಕ್ಬಜ್ ಕಾರ್ಯಕ್ರಮದಲ್ಲಿ ಮಾತನಾಡಿದ ಟೀಮ್ ಇಂಡಿಯಾ ಮಾಜಿ ಆಟಗಾರ ಅಂಬಟಿ ರಾಯುಡು, ಇಂತಹ ಕಠಿಣ ಸನ್ನಿವೇಶಗಳಲ್ಲಿ ಅಕ್ಷರ್ ಪಟೇಲ್ 5ನೇ ಕ್ರಮಾಂಕಕ್ಕೆ ಸೂಕ್ತವಲ್ಲ, ಅವರು 6 ಅಥವಾ 7ನೇ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟ್ ಮಾಡಬಲ್ಲರು.