ತಮ್ಮ ನೈಸರ್ಗಿಕ ಅಭಿನಯ ಮತ್ತು ಸೌಂದರ್ಯದಿಂದಲೇ ಅಪಾರ ಅಭಿಮಾನಿಗಳನ್ನು ಗಳಿಸಿರುವ ಬಾಲಿವುಡ್ ಬ್ಯೂಟಿ ಮೃಣಾಲ್ ಠಾಕೂರ್, ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಹೊಸ ಫೋಟೋಗಳು ಸಖತ್ ವೈರಲ್ ಆಗು. .ದೀಪಾವಳಿ ಸಂಭ್ರಮದ ನಡುವೆ ಮೃಣಾಲ್ ಠಾಕೂರ್ ಅವರು ಒಂದಾದ ಮೇಲೊಂದರಂತೆ ನೀಡುತ್ತಿರುವ ಅತ್ಯಾಕರ್ಷಕ ಲುಕ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿವೆ. .ಮೃಣಾಲ್ ಸಂಪೂರ್ಣವಾಗಿ ಕನ್ನಡಿ ಕೆಲಸ (ಮಿರರ್ ವರ್ಕ್) ಹಾಗೂ ಸೂಕ್ಷ್ಮವಾದ ಕಸೂತಿಯಿಂದ ಕೂಡಿದ ಐವರಿ ಬಣ್ಣದ ಸೀರೆಯನ್ನು ಉಟ್ಟು ಹಬ್ಬದ ವಾತಾವರಣಕ್ಕೆ ತಕ್ಕಂತೆ ಕಂಗೊಳಿಸಿದ್ದಾರೆ. .