ಕುಣಿಗಲ್: ಸಂವಿಧಾನವು ಪಥದರ್ಶಿಯಾಗಿ, ಕೈದೀವಿಗೆಯಾಗಿ ಪ್ರಜೆಗಳನ್ನು ಬಹುಕಾಲದವರೆಗೆ ರಕ್ಷಿಸಿ ಮುನ್ನಡೆಸುವ ಧ್ಯೇಯೋದ್ದೇಶವನ್ನು ಹೊಂದಿರುತ್ತದೆ. ಆದರೆ ಮಾನವೋದ್ಧಾರಕ್ಕಾಗಿ ರೂಪಿತವಾಗಿರುವ ಸಂವಿ. ಆದರೆ ಮಾನವೋದ್ಧಾರಕ್ಕಾಗಿ ರೂಪಿತವಾಗಿರುವ ಸಂವಿಧಾನವು ಮೂರ್ಖರ, ಅವಿವೇಕಿಗಳ, ಭ್ರಷ್ಟರ, ವಂಚಕರ, ಮೋಸಗಾರರ ಕೈಗೆ ಸಿಕ್ಕಿದ್ದೇ ಆದರೆ ಆ ದೇಶದ ಸಂವಿಧಾನದ ಆಶೋತ್ತರಗಳು ಕಾರ್ಯರೂಪಗೊಳ್ಳಲು ಕಷ್ಟಸಾಧ್ಯ ಎಂದು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಮುಖ್ಯಸ್ಥ ಸ್ವಾಮಿ ವೀರೇಶಾನಂದ ಸರಸ್ವತಿ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2026-27ನೇ ಸಾಲಿನ ವಾರ್ಷಿಕ ಚಟುವಟಿಕೆಗಳನ್ನು ಮತ್ತು ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ದೇಶವು ತನ್ನ ಪ್ರಜೆಗಳ ಉದ್ಧಾರಕ್ಕಾಗಿ, ಸಬಲೀಕರಣಕ್ಕಾಗಿ, ಅವರುಗಳನ್ನು ಪ್ರಜ್ಞಾವಂತರನ್ನಾಗಿ ರೂಪಿಸಲು ತನ್ನದೇ ಆದ ಸಂವಿಧಾನವನ್ನು ರಚಿಸಿಕೊಂಡಿರುತ್ತದೆ.