ಪ್ರಧಾನಿ ಮೋದಿ ಛತ್ತೀಸ್ಗಢದ ಬಸ್ತರ್ನಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ. ಹಿಂದೆ ನಕ್ಸಲ್ ಚಟುವಟಿಕೆಗಳ ತಾಣವಾಗಿದ್ದ ಬಸ್ತರ್ ಈಗ ಅಭಿವೃದ್ಧಿ ಪಥದಲ್ಲಿದೆ. ಭದ್ರತಾ ಪಡೆಗಳ ತ್ಯಾಗ ಮತ್ತು ಸರ್ಕಾರದ ಯೋಜನೆಗಳಿಂದ ನಕ್ಸಲ್ ಪ್ರಭಾವ ಕಡಿಮೆಯಾಗಿ ರಸ್ತೆ, ಶಿಕ್ಷಣ, ಉದ್ಯೋಗ ಸೇರಿದಂತೆ ಮೂಲಸೌಕರ್ಯಗಳು ಬೆಳೆಯುತ್ತಿವೆ. ಮೋದಿ ಭೇಟಿಯು ಯೋಧರ ಸೇವೆಯನ್ನು ಗೌರವಿಸಿ, ಬಸ್ತರ್ನ ಸರ್ವತೋಮುಖ ಪ್ರಗತಿಗೆ ಹೊಸ ಉತ್ತೇಜನ ನೀಡಲಿದೆ. ಬಸ್ತರ್, ನವೆಂಬರ್ 08: ದೇಶದಾದ್ಯಂತ ದೀಪಾವಳಿ ಸಂಭ್ರಮ ಮನೆಮಾಡಿದೆ. ಈ ವಿಶೇಷ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಛತ್ತೀಸ್ಗಢದ ಬಸ್ತರ್ಗೆ ತೆರಳಿ, ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭದ್ರತಾ ಪಡೆಗಳ ಯೋಧರೊಂದಿಗೆ ಹಬ್ಬ ಆಚರಿಸಲಿದ್ದಾರೆ.