ಇ.ಡಿ ತನ್ನ ಗಮನಕ್ಕೆ ಬರುವ ಪ್ರತಿಯೊಂದು ಪ್ರಕರಣವನ್ನು ತನಿಖೆ ಮಾಡಲು ಸೂಪರ್ ಪೊಲೀಸ್ ಸಂಸ್ಥೆಯಲ್ಲ ಎಂದು ತಿಳಿಸಿರುವ ಕರ್ನಾಟಕ ಹೈಕೋರ್ಟ್, ಶಾಸಕ ಕೆ.ವೈ. ನಂಜೇಗೌಡ ವಿರುದ್ಧದ ಕೋಮುಲ್ ಪ್ರಕರಣದ ಇಡಿ ಪ್ರಕ್ರಿಯೆಗಳನ್ನು ರದ್ದುಗೊಳಿಸಿದೆ. ಇ.ಡಿ.ಯು ತನ್ನ ವ್ಯಾಪ್ತಿಯನ್ನು ಮೀರಿ ಖಾಸಗಿ ದೂರು ದಾಖಲಿಸಲು ಮುಂದಾಗಿರುವುದನ್ನೂ ಹೈಕೋರ್ಟ್ ತೀವ್ರವಾಗಿ ಆಕ್ಷೇಪಿಸಿದೆ. ಬೆಂಗಳೂರು, ನವೆಂಬರ್ 08: ತನ್ನ ಗಮನಕ್ಕೆ ಬರುವ ಪ್ರತಿಯೊಂದು ಪ್ರಕರಣವನ್ನೂ ತನಿಖೆ ಮಾಡುವ ‘ಸೂಪರ್ ಪೊಲೀಸ್’ ಸಂಸ್ಥೆ ಜಾರಿ ನಿರ್ದೇಶನಾಲಯದ (ED) ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.