ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ಪೈಸ್ ಜೆಟ್ನ ಮೂರು ವಿಮಾನಗಳು ಪ್ರಯಾಣಿಕರಿಗೆ ಕೈಕೊಟ್ಟಿದ್ದು, ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಪೈಸ್ ಜೆಟ್ನ ಮೂರು ವಿಮಾನಗಳ ಹಾರಾಟದಲ್ಲಿ ಭಾರೀ ವಿಳಂಭವಾಗಿದೆ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದೆ. ಗಂಟೆಗಳ ಮುಂಚೆಯೆ ಏರ್ಪೋರ್ಟ್ಗೆ ಬಂದು ಕುಳಿತಿದ್ದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಕೆಂಪೇಗೌಡ ಏರ್ಪೋರ್ಟ್ನಲ್ಲಿ ನೂರಾರು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಮಾನ ಹಾರಾಟದಲ್ಲಿ ವಿಳಂಬ ಆಗಿದೆ. ಜೊತೆಗೆ ಟೆಕ್ನಿಕಲ್ ಸಮಸ್ಯೆ ಹೇಳಿ ನಮಗೆ ಬೋರ್ಡಿಂಗ್ ಪಾಸ್ ಕೂಡ ನೀಡದೇ ವಿಳಂಬ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಎಲ್ಲಿಂದ ಎಲ್ಲಿಗೆ ಹೋಗಬೇಕಿತ್ತು?