ರಣ್ಬೀರ್ ಕಪೂರ್ ಹೇಳಿರುವಂತೆ, ಇದು ಅವರ ನಟನೆಯ ಕೊನೆಯ ದಶಕವಂತೆ. ಅಂದರೆ 2030ಕ್ಕೆ ಅವರು ನಟನೆಯನ್ನು ನಿಲ್ಲಿಸಲಿದ್ದಾರಂತೆ. ಬಿಬಿಸಿ ಏಷ್ಯನ್ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಿ, ತಮಗೆ ಸಿನಿಮಾ ನಿರ್ದೇಶನ ಮಾಡುವ ಆಸೆ ಇದೆ ಎಂದರು. ಅದೇ ಸಂದರ್ಶನದಲ್ಲಿ ‘ನಟನಾಗಿ ಇದು ನನ್ನ ಕೊನೆಯ ದಶಕ’ ಎಂದರು. ಆ ಮೂಲಕ ತಾವು 2030ಕ್ಕೆ ನಟನೆಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ.