ಪಾನಿಪುರಿ, ಸೇವ್ ಪುರಿ ಹಾಗೂ ಮಸಾಲಾ ಪುರಿ ಹೀಗೆ ಸ್ಟ್ರೀಟ್ ಫುಡ್ ಹೆಸರು ಕೇಳಿದ್ರೇನೆ ಬಾಯಲ್ಲಿ ನೀರೂರುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಈ ಫುಡ್ಗಳನ್ನು ಬಾಯಿ ಚಪ್ಪರಿಸಿಕೊಂಡು ಸವಿಯುವವರೇ. ಆದರೆ ಇದೀಗ ವೃದ್ಧೆಯೊಬ್ಬರು ರಸ್ತೆ ಬದಿಯಲ್ಲಿ ಪಾನಿಪುರಿ ತಿನ್ನುವ ಅಜ್ಜಿಯ ವಿಡಿಯೋಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ. ಭಾರತೀಯ ಬೀದಿ ಬದಿ ಆಹಾರಗಳಿಗೆ ಎಲ್ಲರೂ ಫಿದಾ ಆಗ್ತಾರೆ. ಸಂಜೆ ವೇಳೆ ಫ್ರೆಂಡ್ಸ್ ಜತೆಗೆ ಹೊರಗಡೆ ಹೋದಾಗ ಗೋಲ್ಗಪ್ಪಾ, ಪಾನಿಪುರಿ ತಿನ್ನದೇ ಹೋದ್ರೆ ಮನಸ್ಸಿಗೆ ಸಮಾಧಾನನೇ ಇರಲ್ಲ. ಆದರೆ ಇಲ್ಲೊಬ್ಬಳು ವೃದ್ಧೆಯೂ (old woman) ಬೀದಿ ಬದಿಯಲ್ಲಿ ಪಾನಿಪುರಿ ಸವಿದಿದ್ದಾರೆ.