ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದೊಡ್ನಳ್ಳಿ ಗ್ರಾಮದಲ್ಲಿ ಬಾವಿ ನೀರಿಗೆ ಬೆಂಕಿ ಹಚ್ಚಿದರೆ ಉರಿಯುತ್ತಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ನೀರಿನಲ್ಲಿ ತೈಲ ಮಿಶ್ರಣವಾಗಿ ಕಪ್ಪು ಬಣ್ಣಕ್ಕೆ ತಿರುಗಿದ್ದು, ಪವರ್ ಗ್ರಿಡ್ನಿಂದ ಆಯಿಲ್ ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿದೆ. ಪ್ರಾಥಮಿಕ ವರದಿಯಲ್ಲಿ ನೀರು ಕುಡಿಯಲು ಯೋಗ್ಯವಲ್ಲ ಎಂದು ತಿಳಿದುಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಉತ್ತರ ಕನ್ನಡ, ನವೆಂಬರ್ 08: ಸಾಮಾನ್ಯವಾಗಿ ಬಾವಿ ನೀರನ್ನು ಬೆಂಕಿ ನಂದಿಸಲು ಬಳಸುತ್ತಾರೆ. ಆದರೆ ಇಲ್ಲೊಂದು ಗ್ರಾಮದಲ್ಲಿ ಬಾವಿ ನೀರಿಗೆ ಬೆಂಕಿ ಕಡ್ಡಿ ಗೀರಿದರೆ ಸಾಕು, ನೀರೇ ಧಗಧಗನೆ ಉರಿಯುತ್ತದೆ.