Asian Games 2026: ಪಾಕಿಸ್ತಾನವನ್ನ 19 ರನ್ಗಳಿಂದ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟ ಭಾರತ. ಜಪಾನ್ನ ನಗೋಯಾದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಎದುರಾಳಿ ಪಾಕಿಸ್ತಾನವನ್ನ 19 ರನ್ಗಳಿಂದ ಬಗ್ಗುಬಡಿದ ಭಾರತೀಯ ಪುರುಷರ ಕ್ರಿಕೆಟ್ ತಂಡ ಚಿನ್ನದ ಪದಕವನ್ನ ಮುಡಿಗೇರಿಸಿಕೊಂಡಿದೆ. ತೀವ್ರ ಕುತೂಹಲ ಕೆರಳಿಸಿದ್ದ ಈ ಪಂದ್ಯವು ಯಾವುದೇ ಹ್ಯಾಂಡ್ ಶೇಕ್ ಇಲ್ಲದೆ, ಸ್ವಲ್ಪ ವಿಳಂಬವಾದರೂ ಕೂಡ ಪದಕ ಪ್ರದಾನ ಸಮಾರಂಭದೊಂದಿಗೆ ಮುಕ್ತಾಯಗೊಂಡಿದ್ದು ವಿಶೇಷವಾಗಿತ್ತು. ರಾಜಕೀಯ ಉದ್ವಿಗ್ನತೆಗಳ ನಡುವೆ.