ನೈಸ್ ವಿವಾದಕ್ಕೆ ಸ್ಫೋಟಕ ತಿರುವು; ಡಿಕೆಶಿ ಕುಟುಂಬದ ₹2,000 ಕೋಟಿ ಆಸ್ತಿ ಯಾವುದು? HDK ಆರೋಪ. ಬೆಂಗಳೂರು: ನೈಸ್ ರಸ್ತೆ ಯೋಜನೆಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ತ ರೈತರನ್ನು ಭೇಟಿಯಾದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಶನಿವಾರವೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ಮುಂದುವರಿಸಿದರು. ನೈಸ್ ಯೋಜನೆ, ಭೂಸ್ವಾಧೀನ ಹಾಗೂ ಯೋಜನೆಯ ಸುತ್ತಮುತ್ತಲಿನ ಭೂ ವ್ಯವಹಾರಗಳ ಕುರಿತು ಹಲವು ಆರೋಪಗಳನ್ನು ಮಾಡಿದರು. ಬೆಂಗಳೂರಿನ ಹೊಸಕೆರೆಹಳ್ಳಿ ಟೋಲ್ ಬಳಿಯಿರುವ ಶೋಭಾ ಅಪಾರ್ಟ್ಮೆಂಟ್ ವಿಚಾರ.