ಹನುಮಾನ್ ಚಾಲೀಸಾ ಶರವೇಗದಲ್ಲಿ ಪಠಿಸಿ ಕನ್ನಡಿಗರು ಸೇರಿ ಭಾರತೀಯರ ಮನಗೆದ್ದ ಅಮೆರಿಕದ ವ್ಯಕ್ತಿ! ವಿಡಿಯೋ ವೈರಲ್. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಆದರೆ, ಇದೀಗ ಅಮೆರಿಕದ ಟೆಕ್ಸಾಸ್ ಮೂಲದ ವ್ಯಕ್ತಿಯೊಬ್ಬರು ಹಿಂದೂಗಳ ಪವಿತ್ರ ಸ್ತೋತ್ರವಾದ ಹನುಮಾನ್ ಚಾಲೀಸಾವನ್ನ ಅತ್ಯಂತ ವೇಗವಾಗಿ ಮತ್ತು ಸ್ಪಷ್ಟವಾಗಿ ಪಠಿಸಿರುವ ವಿಡಿಯೋವೊಂದು ಸೋಶಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಅಮೆರಿಕದವರ ಈ ಭಕ್ತಿ ಮತ್ತು ಉಚ್ಚಾರಣೆಯ ಸ್ಪಷ್ಟತೆ ಕಂಡು ಭಾರತೀಯರು ಮೂಕವಿಸ್ಮಿತರಾಗಿದ್ದಾರೆ. ಯಾರು ಈ ನಿಕ್.