* ದೀಪಾವಳಿ ಹಬ್ಬಕ್ಕೆ ಪೂಜಾ ಸಾಮಗ್ರಿ ಖರೀದಿ* ಹೂವಿನ ದರದಲ್ಲಿ ತುಸು ಇಳಿಕೆಯ ನೆಮ್ಮದಿಉಡುಪಿ: ಸಂಪತ್ತಿನ ಅಧಿದೇವತೆಯಾದ ಹಾಗೂ ಅಷ್ಟ ಐಶ್ವರ್ಯಗಳನ್ನು ದಯಪಾಲಿಸುವ ಲಕ್ಷ್ಮೀ ದೇವಿ ಆರಾಧನೆಯ ದೀಪಾವ. ವ್ಯಾಪಾರದ ಉನ್ನತಿಗಾಗಿ ಲಕ್ಷ್ಮೀ ದೇವಿಯ ಪೂಜೆಗೆ ಸಜ್ಜಾಗಿದ್ದಾರೆ. ಜಿಲ್ಲೆಯ ದೇವಿ ಮಂದಿರಗಳಲ್ಲೂ ವಿಶೇಷ ಆರಾಧನೆ ನಡೆಯಲಿದೆ. ಮನೆಗಳಲ್ಲಿ ಸಡಗರಬೆಳಕಿನ ಹಬ್ಬವೆಂದೇ ಆಚರಿಸಲ್ಪಡುವ ದೀಪಾವಳಿ ಹಬ್ಬಕ್ಕಾಗಿ ಮನೆಗಳಲ್ಲಿ ಬೆಳಗಲು ಹಣತೆ ಹಾಗೂ ಆಕಾಶದೀಪ ಖರೀದಿಸಿದ್ದಾರೆ. ಮನೆಯಂಗಳದಲ್ಲಿ ಸುಂದರ ರಂಗವಲ್ಲಿ ಹಾಕುವಲ್ಲಿ ಮಹಿಳೆಯರು ನಿರತರಾಗಿದ್ದಾರೆ. ಮನೆ ಮಂದಿಗೆಲ್ಲ ಹೊಸ ಬಟ್ಟೆ, ಪಟಾಕಿ ಖರೀದಿಸಿದ್ದು, ಸಂಭ್ರಮದಿಂದ ಹಬ್ಬ ಆಚರಿಸಲು ಎಲ್ಲ ಮನೆಗಳಲ್ಲೂ ಸಿದ್ಧತೆ ನಡೆದಿದೆ.