ಬೆಂಗಳೂರು: ರಾಜ್ಯದಲ್ಲಿ ಇ20 ಪೆಟ್ರೋಲ್ನಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಎಥೆನಾಲ್ ಬೆರೆಸಿ ಮಾರಾಟ ಮಾಡುತ್ತಿರುವ ಅಕ್ರಮದ ಬಗ್ಗೆ ದಾಖಲೆ ಸಮೇತ ತೈಲ ಕಂಪನಿಗಳ ವಿರುದ್ಧ ಸಿಡಿದೆದ್ದ ರಾಜ್ಯ ಆಹಾರ. ಪೆಟ್ರೋಲ್ನಲ್ಲಿ ಶೇ.20ಕ್ಕಿಂತ ಹೆಚ್ಚು ಎಥೆನಾಲ್ ಬೆರೆಸಿ, ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ಗರಿಷ್ಟ ಎಂದರೆ ಶೇ.31.2ರಷ್ಟು ಎಥೆನಾಲ್ ಮಿಕ್ಸಿಂಗ್ ಆಗಿರುವ ಬಗ್ಗೆ ಸಚಿವರು ಪ್ರಯೋಗಾಲಯದ ವರದಿಯನ್ನು ಮುಂದಿಟ್ಟು ತೈಲ ಕಂಪನಿಗಳಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದರು. ಈ ವಿಚಾರ ರಾಷ್ಟ್ರ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಅಲರ್ಟ್ ಆದ ಆಯಿಲ್ ಕಂಪನಿಗಳು, ತಮ್ಮ ವಿವರಣೆಯನ್ನು ಸೋಷಿಯಲ್ ಮೀಡಿಯಾ ಮೂಲಕ ಕೊಟ್ಟಿವೆ.