Bengaluru Traffic: ಬೆಂಗಳೂರು ಅಂದ್ರೆ ಲಕ್ಷಾಂತರ ಜನರ ಕನಸಿನ ನಗರ. ಒಳ್ಳೆ ಕೆಲಸ, ಭವಿಷ್ಯ ಮತ್ತು ಲೈಫ್ಸ್ಟೈಲ್ ಕೊಟ್ಟಿರೋ ಈ ಮಾಯಾನಗರಿ, ಹೊಟ್ಟೆಪಾಡಿಗೆ ಬಂದ ಪ್ರತಿಯೊಬ್ಬರಿಗೂ ಆಸರೆ ನೀಡಿದೆ. ಆದರೆ, ಈ ಸಿಟಿಯಲ್ಲಿ ದಿನಾ ಬದುಕೋದೇ ಒಂದು ಸಾಹಸವಾದರೆ, ಇನ್ನು ಹಬ್ಬದ ಟೈಮ್ನಲ್ಲಿ ಊರಿಗೆ ಹೋಗೋದು ಅದಕ್ಕಿಂತ ದೊಡ್ಡ ಸಾಧನೆ. ದಸರಾ-ದೀಪಾವಳಿ ಸಮಯದಲ್ಲಿ ಬಸ್, ಟ್ರಾಫಿಕ್ ರಶ್ ನಡುವೆ ಹೆಗೋ ಊರು ಸೇರಿದರೆ ಸಾಕು ಅನಿಸೋದು ಮಾತ್ರ ನೂರಕ್ಕೆ ನೂರರಷ್ಟು ನಿಜ.ದೀಪಾವಳಿ ಸಾಲು ಸಾಲು ರಜೆ ಸಿಗ್ತಿದ್ದ ಹಾಗೆ, ಸಿಟಿಯ ಪ್ರಮುಖ ಎಕ್ಸಿಟ್ ಪಾಯಿಂಟ್ಗಳಾದ ಮೆಜೆಸ್ಟಿಕ್, ಸ್ಯಾಟಲೈಟ್ ಬಸ್ ಸ್ಟ್ಯಾಂಡ್, ಗೊರಗುಂಟೆಪಾಳ್ಯ, ಕೆಆರ್ ಪುರಂ ಮತ್ತು ನೈಸ್ ರೋಡ್ಗಳಲ್ಲಿ ಗಾಡಿಗಳದ್ದೇ ಸಾಲು.