ಈ ಐಪಿಒ ಸಂಪೂರ್ಣವಾಗಿ ಷೇರು ಮಾರಾಟ ಕೊಡುಗೆ (Offer for Sale) ರೂಪದಲ್ಲಿದ್ದು, ಕಂಪನಿಯ ಪ್ರವರ್ತಕ ಷೇರುದಾರರಾದ ಹಿಂದೂಸ್ತಾನ್ ಕೋಕಾ-ಕೋಲಾ ಓವರ್ಸೀಸ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್, ತಲಾ ₹10 ಮುಖಬೆಲೆಯ ಗರಿಷ್ಠ 99.74 ಕೋಟಿ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಲಿದೆ. ಮುಂಬೈ: ಭಾರತದ ಅತಿದೊಡ್ಡ ಸಾಫ್ಟ್ ಡ್ರಿಂಕ್ಸ್ ಮತ್ತು ಪ್ಯಾಕೇಜ್ಡ್ ಪಾನೀಯ ಕಂಪನಿಗಳಲ್ಲಿ ಒಂದಾದ ಹಿಂದೂಸ್ತಾನ್ ಕೋಕಾ-ಕೋಲಾ ಹೋಲ್ಡಿಂಗ್ಸ್ ಲಿಮಿಟೆಡ್ (HCCH), ತನ್ನ ಉದ್ದೇಶಿತ ಆರಂಭಿಕ ಸಾರ್ವಜನಿಕ ಕೊಡುಗೆ (IPO) ಗಾಗಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (SEBI)ಗೆ ಕರಡು ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (DRHP) ಸಲ್ಲಿಸಿದೆ.