ಇಂದು (ನವೆಂಬರ್ 07) ಭಾರತ ಚಿತ್ರರಂಗದ ಸೂಪರ್ ಸ್ಟಾರ್ ನಟ ಕಮಲ್ ಹಾಸನ್ ಹುಟ್ಟುಹಬ್ಬ. ಎಲ್ಲರೂ ಸೇಫ್ ಆದ ಕಮರ್ಶಿಯಲ್ ಸಿನಿಮಾಗಳನ್ನು ತೆಗೆಯುತ್ತಾ ಸ್ಟಾರ್ ಎನಿಸಿಕೊಂಡರೆ ಕಮಲ್ ಹಾಸನ್ ಪ್ರಯೋಗಾತ್ಮಕ ಸಿನಿಮಾಗಳನ್ನು, ತೀಕ್ಷ್ಣ ಸಂದೇಶಗಳನ್ನು ಹೊಂದಿದ ಸಿನಿಮಾಗಳನ್ನು ಮಾಡುತ್ತಾ ಬಂದಿದ್ದಾರೆ. ಇದೇ ಕಾರಣಕ್ಕೆ ಹಲವು ಬಾರಿ ವಿವಾದ, ಪ್ರತಿಭಟನೆಗಳನ್ನು ಎದುರಿಸಿದ್ದಾರೆ. ಆದರೂ ತಮ್ಮ ಹಠವನ್ನು ಬಿಟ್ಟಿಲ್ಲ ಕಮಲ್ ಹಾಸನ್. 22 ವರ್ಷಗಳ ಹಿಂದೆ ವಿವಾದಕ್ಕೆ ಕಾರಣವಾಗಿದ್ದ ಹೆಸರನ್ನೇ ಇಟ್ಟುಕೊಂಡು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ ನಟ.