ವಂದೇ ಭಾರತ್ ರೈಲಿನಲ್ಲಿ ಇಷ್ಟೊಂದು ಗಲೀಜಾ? ತುಕ್ಕು ಹಿಡಿದ ಶೌಚಾಲಯದ ಫೋಟೋ ಹಂಚಿಕೊಂಡ ಪ್ರಯಾಣಿಕ, ರೈಲ್ವೆ ಇಲಾಖೆ ಸ್ಪಷ್ಟನೆ. ಭಾರತೀಯ ರೈಲ್ವೆಯ ಹೆಮ್ಮೆಯ ರೈಲು ಎಂದೇ ಕರೆಸಿಕೊಳ್ಳುವ ವಂದೇ ಭಾರತ್ ಎಕ್ಸ್ಪ್ರೆಸ್ ತನ್ನ ವೇಗ ಹಾಗೂ ಅತ್ಯಾಧುನಿಕ ಸೌಲಭ್ಯಗಳಿಗೆ ಹೆಸರುವಾಸಿಯಾಗಿದೆ. ಆದರೆ, ಇತ್ತೀಚೆಗೆ ಪ್ರಯಾಣಿಕರೊಬ್ಬರು ಈ ಪ್ರತಿಷ್ಠಿತ ರೈಲಿನಲ್ಲಿ ತಾವು ಎದುರಿಸಿದ ಕಹಿ ಅನುಭವವನ್ನ ಸಾಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ ಹಂಚಿಕೊಂಡಿದ್ದು, ರೈಲಿನ ಶೋಚನೀಯ ಸ್ಥಿತಿ ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ರೈಲಿನ ಒಳಾಂಗಣ ಗಲೀಜಾಗಿದ್ದು, ಶೌಚಾಲಯಗಳು ತುಕ್ಕು.