ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಕ್ನೋಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಹೈಜಾಕ್ ಪತ್ರವೊಂದು ಪತ್ತೆಯಾಗಿದೆ. ಪತ್ರ ಸಿಕ್ಕ ಬೆನ್ನಲ್ಲೇ ವಿಮಾನವನ್ನು ತುರ್ತಾಗಿ ಏರ್ಪೋರ್ಟ್ ಲ್ಯಾಂಡ್ ಮಾಡಲಾಗಿದೆ. ಪ್ರಯಾಣಿಕರು ಬಾತ್ ರೂಮ್ಗೆ ಹೋದಾಗ ಪತ್ರ ಪತ್ತೆ ಆಗಿದೆ. ಏರ್ಪೋರ್ಟ್ ಪೊಲೀಸರು ವಿಚಾರಣೆ ನಡೆಸಿದ್ದಾರೆ. ದೇವನಹಳ್ಳಿ, ನವೆಂಬರ್ 07: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಕ್ನೋಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಹೈಜಾಕ್ ಮಾಡ್ತಿರುವುದಾಗಿ ಪತ್ರವೊಂದು ಪತ್ತೆಯಾದ ಘಟನೆ ನಡೆದಿದೆ. ಅಷ್ಟರಲ್ಲಿ ಟೇಕ್ಆಫ್ ಆಗಿದ್ದ ವಿಮಾನ ಪತ್ರ ಸಿಕ್ಕ ಬೆನ್ನಲ್ಲೇ ತುರ್ತಾಗಿ ಪುನಃ ಏರ್ಪೋರ್ಟ್ಗೆ ವಾಪಸ್ ಆಗಿದೆ.