ಶಾಲೆಗೆ ಲಕ್ಷ ಲಕ್ಷ ಫೀಸ್ ಕಟ್ಟಿದರೂ ಮತ್ತೆ ಟ್ಯೂಷನ್ಗೆ ಯಾಕೆ ಹಣ ಕೊಡಬೇಕು? ಶುರುವಾಯ್ತು ಹೊಸ ಚರ್ಚೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದೇ ಪೋಷಕರಿಗೆ ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಪ್ರತಿಷ್ಠಿತ ಶಾಲೆಗಳಿಗೆ ಮಕ್ಕಳನ್ನ ಸೇರಿಸಲು ಪೋಷಕರು ಲಕ್ಷಾಂತರ ರೂಪಾಯಿಗಳನ್ನ ಖರ್ಜು ಮಾಡುತ್ತಿದ್ದಾರೆ. ಆದರೆ ವಿಪರ್ಯಾಸವೆಂದರೆ, ಶಾಲೆಯಲ್ಲಿ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ನಂತಹ ವಿಷಯಗಳನ್ನ ಕಲಿಯಲು ಗಂಟೆಗಟ್ಟಲೆ ಸಮಯ ಕಳೆಯುವ ಮಕ್ಕಳು, ಶಾಲೆಯ ನಂತರ ಅದೇ ವಿಷಯಗಳನ್ನ ಕಲಿಯಲು ಮತ್ತೆ ಖಾಸಗಿ ಟ್ಯೂಷನ್.