ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸದ ಮೇಲೆ ದಾಳಿ.ಮೂರು ಸರಣಿ ವಿಡಿಯೋಗಳನ್ನು ಹಂಚಿಕೊಂಡು ಕಿಡಿಕಾರಿದ ಅಭಿಷೇಕ್ ಬ್ಯಾನರ್ಜಿ.ನ್ಯಾಯಾಂಗ, ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಟ. 'ಬಿಜೆಪಿ ಗೂಂಡಾಗಳು ನಡು ರಾತ್ರಿ 2 ಗಂಟೆಯಲ್ಲಿ ದಾಳಿ ಮಾಡಿದ್ದಾರೆ. 6 ತಿಂಗಳಲ್ಲಿ ಮಾಡುತ್ತಿರುವ ಏಳನೇ ದಾಳಿ ಇದು' ಎಂದು ಬರೆದುಕೊಂಡಿದ್ದಾರೆ.ಕೋಲ್ಕತ್ತಾ ಪೊಲೀಸರು, ನ್ಯಾಯಾಧೀಶರು, ಬಿಜೆಪಿ ಸರ್ಕಾರವನ್ನು ಉಲ್ಲೇಖಿಸಿ ಅಭಿಷೇಕ್ ಬ್ಯಾನರ್ಜಿ ಅವರು ಮಾಡಿರುವ ಟ್ವೀಟ್ ಭಾರಿ ಸಂಚಲನವನ್ನು ಸೃಷ್ಟಿಸಿದ್ದಾರೆ. ಸಾಕಷ್ಟು ವೀಕ್ಷಣೆ ಪಡೆದುಕೊಂಡಿದ್ದು, ತರಹೇವಾರಿ ಕಾಮೆಂಟ್ಗಳು ಕೇಳಿಬಂದಿವೆ. ಐದಕ್ಕೂ ಹೆಚ್ಚು ಜನರು ಅಭಿಷೇಕ್ ಅವರ ಮನೆಯ ಮುಂದೆ ಓಡಾಡಿಕೊಂಡು ದಾಂಧಲೆ ಮಾಡಿರುವುದು ವಿಡಿಯೋದಲ್ಲಿ ಇದೆ.