ಪೆಟ್ರೋಲ್ನಲ್ಲಿ ನಿಗದಿತ ಶೇ 20ಕ್ಕಿಂತಲೂ ಹೆಚ್ಚು ಎಥೆನಾಲ್ ಬೆರೆಸುತ್ತಿರುವ ಪರಿಣಾಮ ವಾಹನಗಳ ಎಂಜಿನ್ ಹಾಳಾಗುತ್ತಿದ್ದು, ವಾಹನ ಸವಾರರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ. ಈ ಕಳಪೆ ಇಂಧನ ತಡೆಗೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಪೆಟ್ರೋಲ್ ಬಂಕ್ಗಳಲ್ಲಿ ಎಥೆನಾಲ್ ಪ್ರಮಾಣ ಕಡ್ಡಾಯ ಪ್ರದರ್ಶನ, ನಿಯಮ ಮೀರಿದ ತೈಲ ಕಂಪನಿಗಳಿಗೆ ದಂಡ ಹಾಗೂ ಎಂಜಿನ್ ಹಾನಿಗೆ ವಿಶೇಷ ಪರಿಹಾರ ನಿಧಿ ಸ್ಥಾಪನೆ ಸೇರಿದಂತೆ ಆಹಾರ ಸಚಿವ ರಿಜ್ವಾನ್ ಅರ್ಷದ್ ಕೇಂದ್ರದ ಮುಂದೆ ಪ್ರಮುಖ ಬೇಡಿಕೆಗಳನ್ನಿಟ್ಟಿದ್ದಾರೆ.