‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಎಂಬ ಗಾದೆ ಮಾತನ್ನು ನೀವು ಕೇಳಿರುತ್ತೀರಿ. ಮಂಗಳೂರಿನಲ್ಲಿ ಅಂಥದ್ದೇ ಒಂದು ಘಟನೆಗೆ ಪೊಲೀಸರು ಕಾರಣವಾಗಿದ್ದಾರೆ. ನಗರದ ನೆಹರು ಮೈದಾನದ ಬಳಿ ವಾಕಿಂಗ್ ಮುಗಿಸಿ ಮನೆಗೆ ಹೋಗುತ್ತಿದ್ದ ಎಲೆಕ್ಟ್ರಿಷಿಯನ್ ಒಬ್ಬರನ್ನು ಹೊಯ್ಸಳ ವಾಹನದಲ್ಲಿ ಬಂದು ತಡೆದು, ಹಲ್ಲೆ ನಡೆಸಿ ಹಣ ವಸೂಲಿ ಮಾಡಿದ ಆರೋಪದ ಮೇಲೆ ದಕ್ಷಿಣ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಮಂಗಳೂರು, ನವೆಂಬರ್ 7: ಗಸ್ತಿನ ಹೆಸರಿನಲ್ಲಿ ಹೊಯ್ಸಳ ವಾಹನದಲ್ಲಿ ಬಂದು ಯುವಕನೊಬ್ಬನಿಂದ ಹಣ ವಸೂಲಿ ಮಾಡಿದ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಯನ್ನು ಬಂಧಿಸಲಾಗಿದೆ. ಸಿಬ್ಬಂದಿಯಾದ ಶಿವರಾಜ್ ಮತ್ತು ಹಿರಣ್ಣ ಬೆನ್ನಿ ಬಂಧಿತರು.