ಹಾಂಕಾಂಗ್ ಸಿಕ್ಸಸ್ ಎಂಬುದು ಕೇವಲ 6 ಓವರ್ಗಳ ಚುಟುಕು ಕ್ರಿಕೆಟ್ ಟೂರ್ನಿಯಾಗಿದೆ. ಈ ಬಾರಿ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಕಣಕ್ಕಿಳಿಯುತ್ತಿವೆ. ಇಲ್ಲಿ ಪ್ರತಿ ತಂಡದಲ್ಲಿ ಒಟ್ಟು 7 ಆಟಗಾರರಿದ್ದು, ಕೇವಲ 6 ಮಂದಿ ಮಾತ್ರ ಕಣಕ್ಕಿಳಿಯಲಿದ್ದಾರೆ. ಈ ಆರು ಆಟಗಾರರಲ್ಲಿ ವಿಕೆಟ್ ಕೀಪರ್ ಹೊರತುಪಡಿಸಿ ಉಳಿದ ಐದೂ ಆಟಗಾರರು ತಲಾ ಒಂದು ಓವರ್ ಬೌಲಿಂಗ್ ಮಾಡುವುದು ಕಡ್ಡಾಯವಾಗಿದೆ. ಕ್ರಿಕೆಟ್ ಜಗತ್ತಿನ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮತ್ತೆ ಮುಖಾಮುಖಿಯಾಗಲು ಸಜ್ಜಾಗಿವೆ. ಆದರೆ, ಈ ಬಾರಿ ಇವೆರಡೂ ತಂಡಗಳು ಸೆಣಸಾಡುತ್ತಿರುವುದು ಕೇವಲ 6 ಓವರ್ಗಳ ಚುಟುಕು ಪಂದ್ಯದಲ್ಲಿ ಎಂಬುದು ವಿಶೇಷ.