ಕಾರವಾರ: ಪ್ರಸಿದ್ಧ ಪ್ರಸಾದ ನೇತ್ರಾಲಯದ 12 ನೇ ಶಾಖೆಯು ಕಾರವಾರದಲ್ಲಿ ಶುಕ್ರವಾರ ಶುಭಾರಂಭಗೊಂಡಿತು. ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಇದಾಗಿದ್ದು, ನಗರ ಡಾ.ಪಿಕಳೆ ರಸ್ತೆ ಕೊಂಕಣ ಮೆಡಿಕಲ್. ದೇಶದ ಎಲ್ಲ ಅತ್ಯಾಧುನಿಕ ಕಣ್ಣಿನ ಚಿಕಿತ್ಸಾ ಯಂತ್ರೋಪಕರಣಗಳು ಹಾಗೂ ತಂತ್ರಜ್ಞಾನಗಳು ಇಲ್ಲಿದ್ದು, ಕಣ್ಣಿನ ತಜ್ಞರಾದ ಡಾ.ನಿರಂಜನ್ ಹಾಗೂ ಡಾ.ಮೇಘಾ ಶೇಟ್ ಕಾರ್ಯ ನಿರ್ವಹಿಸುವರು. ಉಡುಪಿ ಮೂಲದ ಪ್ರಸಾದ ನೇತ್ರಾಲಯ ರಾಜ್ಯದ 8 ಜಿಲ್ಲೆಗಳಲ್ಲಿ ಕಾರ್ಯ ವ್ಯಾಪ್ತಿಯನ್ನು ಹೊಂದಿದ ಆಸ್ಪತ್ರೆಗಳ ಸಮೂಹವಾಗಿದೆ. ಗ್ಲೊಕೋಮಾ, ಮೆಳ್ಳೆಗಣ್ಣು, ರೆಟಿನಾ ವಿಭಾಗ, ಕಣ್ಣಿನ ನರ ವಿಭಾಗ ಸೇರಿ ಎಲ್ಲ ಸೇವೆಗಳೂ ಇಲ್ಲಿ ಲಭ್ಯ ಎಂದು ಪ್ರಸಾದ ನೇತ್ರಾಲಯದ ತಜ್ಞರು ತಿಳಿಸಿದ್ದಾರೆ.